ಪಕ್ಷಿ: ಚೋರೆ ಹಕ್ಕಿ

Spotted Dove
ಚೋರೆ ಹಕ್ಕಿ

ಸಂಕ್ಷಿಪ್ತ ಮಾಹಿತಿ

ಇತರ ಹೆಸರುಗಳು ಪರ್ವತ ಪಾರಿವಾಳ, ಮುತ್ತು ಕತ್ತಿನ ಪಾರಿವಾಳ, ಕಸೂತಿ ಕತ್ತಿನ ಪಾರಿವಾಳ, ಸ್ಪಾಟೆಡ್ ಡವ್ (Spotted Dove)
ದ್ವಿನಾಮ (Binomial name) ಸ್ಪಿಲೋಪೇಲಿಯ ಚೈನೆಸಿಸ್ (Spilopelia Chinensis)
ಆವಾಸ ಸ್ಥಾನ ಕುರಚಲು-ಕಾಡು, ಅಲ್ಪ-ನಿತ್ಯ ಹರಿದ್ವರ್ಣ ಕಾಡು, ಗೋಮಾಳಗಳು, ತೋಪುಗಳು, ಉದ್ಯಾನವನಗಳು, ತೋಟಗಳು, ಜನವಸತಿ ಪ್ರದೇಶ
ವ್ಯಾಪ್ತಿ ಭಾರತ, ಪಾಕಿಸ್ತಾನ, ಉಜ್ಬೇಕಿಸ್ತಾನ , ತುರ್ಕ್ಮೆನಿಸ್ತಾನ್, ಕಝೆಕಿಸ್ತಾನ್, ತಜಿಕಿಸ್ತಾನ್, ಆಫ್ಗಾನಿಸ್ತಾನ್ ಮತ್ತು ನೇಪಾಳ
ಆಹಾರ ಕ್ರಮ ಹಣ್ಣುಗಳು, ಕೀಟಗಳು, ಹೂವಿನ ಮಕರಂದ ಮತ್ತು ಅತ್ತಿ, ಗೋಣಿ, ಆಲ, ಬಸರಿ ಮೊದಲಾದ ಮರಗಳ ಹಣ್ಣುಗಳು.

ವೈಜ್ಞಾನಿಕ ವರ್ಗೀಕರಣ (Scientific classification)

ಸಂಕುಲ (Kingdom) ಅನಿಮೇಲಿಯಾ (Animalia)
ವಂಶ (Phylum) ಖೊರ್ಡಟ (Chordata)
ವರ್ಗ (Class) ಏವ್ಸ್ (Aves)
ಗಣ (Order) ಕೊಲಂಬಿಫಾರ್ಮ್ಸ್ (Columbiformes)
ಕುಟುಂಬ (Family) ಕೊಲಂಬಿಡೆ (Columbidae)
ಜಾತಿ (Genus) ಸ್ಪಿಲೋಪೇಲಿಯ (Spilopelia)
ಪ್ರಭೇದ (Species) ಸ್ಪಿಲೋಪೇಲಿಯ ಚೈನೆಸಿಸ್ (Spilopelia Chinensis)

ಚೋರೆ ಹಕ್ಕಿ, ಭಾರತ ಉಪಖಂಡ ಹಾಗೂ ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಪಾರಿವಾಳದ ಜಾತಿಗೆ ಸೇರಿದ ಹಕ್ಕಿ. ಇದು ಗಾತ್ರದಲ್ಲಿ ಪಾರಿವಾಳಗಳಿಗಿಂತ ಚಿಕ್ಕದಿದ್ದು, ಕಡು ಬೂದು ಬಣ್ಣದ ಉದ್ದ ಬಾಲ ಹೊಂದಿರುತ್ತದೆ. ಇದರ ಉದ್ದ 28 ರಿಂದ 32 ಸೆಂಟಿಮೀಟರ್ (11.2 - 12.8 ಇಂಚು) ಇರುತ್ತದೆ.

ಚೋರೆ ಹಕ್ಕಿಯು ರೆಕ್ಕೆ ಮತ್ತು ಬಾಲದಲ್ಲಿ ಬಿಳಿ-ಕಪ್ಪು ಕೂಡಿದ ಚಿಕ್ಕ ಪುಕ್ಕಗಳನ್ನು ಹೊಂದಿರುತ್ತವೆ. ಕುತ್ತಿಗೆಯ ಬಳಿ ಅರ್ಧ ಸುತ್ತಿನಷ್ಟು ಮಚ್ಚೆಗಳಂತಿರುವ ವಿಶೇಷವಾದ ಪುಕ್ಕಗಳು, ಚೋರೆ ಹಕ್ಕಿಯನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ. ಹೊಟ್ಟೆ ಮತ್ತು ಕೆಳ ಕುತ್ತಿಗೆಯ ಭಾಗವು ಕಂದು ಮಿಶ್ರಿತ ತಿಳಿ ಗುಲಾಬಿ ಬಣ್ಣದ್ದಾಗಿರುತ್ತದೆ. ಹೊಟ್ಟೆಯ ಮಧ್ಯ ಭಾಗವು ಬಿಳಿ ಬಣ್ಣದ್ದಾಗಿರುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ಒಂದೇ ತೆರನಾಗಿದ್ದು, ಸಣ್ಣ ಪ್ರಾಯದ ಹಕ್ಕಿಗಳಲ್ಲಿ ಬಣ್ಣವು ತಿಳಿಯಾಗಿರುತ್ತದೆ.

ನೆಲದಿಂದ ಹಾರುವಾಗ ರೆಕ್ಕೆಗಳಿಂದ ವೇಗದ ಪಟಪಟನೆಯ ಸದ್ದು ಮಾಡುತ್ತವೆ. ಇವುಗಳು ಸಾಮಾನ್ಯವಾಗಿ ಪೊದೆಗಳಿಂದ ಕೂಡಿದ ಕಾಡುಗಳಲ್ಲಿ, ತೋಟಗಳಲ್ಲಿ ಅಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಕಾಣ ಸಿಗುತ್ತವೆ. ಹುಲ್ಲಿನ ಮತ್ತು ಹಣ್ಣಿನ ಬೀಜಗಳು, ವಿವಿಧ ಹಣ್ಣುಗಳು ಇವುಗಳ ಪ್ರಮುಖ ಆಹಾರ. ಕೆಲವೊಮ್ಮೆ ಸಣ್ಣ ಕೀಟಗಳನ್ನು, ಗೆದ್ದಲನ್ನು ಕೂಡ ತಿನ್ನುತ್ತವೆ.

ಬೇಸಿಗೆಯ ಸಮಯದಲ್ಲಿ ಕಡ್ಡಿಗಳಿಂದ ಬಟ್ಟಲು ಗಾತ್ರದ ಗೂಡು ಕಟ್ಟುತ್ತವೆ. ಬಿಳಿ ಬಣ್ಣದ ಎರಡು ಮೊಟ್ಟೆಗಳನ್ನಿಡುತ್ತವೆ. 13 ದಿನದಲ್ಲಿ ಮೊಟ್ಟೆಯೊಡೆದು ಮರಿ ಹೊರಗೆ ಬರುತ್ತದೆ ಮತ್ತು 15 ದಿನಗಳಲ್ಲಿ ಪುಕ್ಕಗಳು ಮೂಡುತ್ತವೆ.

ಇವುಗಳ ವಿಶಿಷ್ಟವಾದ ಕೂಗು, ಇವುಗಳ ಇರುವಿಕೆಯನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ.

Spotted Dove
ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!